Header Ads

Best of the 545 Civil PCI Latest Information

 

ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ| ಕೆ.ಅನ್ನದಾನಿ ರವರು ಇವರು ನಿಯಮ 351 ರಡಿ ಮಂಡಿಸಿರುವ ಸೂಚನೆಗೆ ಹೇಳಿಕೆ

ವಿಷಯ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅಧಿಸೂಚನೆ ಸಂಖ್ಯೆ: 98/ನೇಮಕಾತಿ-2/2021-21 ರಲ್ಲಿ 545 ಪಿಎಸ್‌ಐ(ಸಿವಿಲ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿ ನಿಯಮಾನುಸಾರ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳನ್ನು ನಡೆಸಿ ಅರ್ಹಗೊಂಡ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ದಿನಾಂಕ: 19,02022 ರಂದು ಪ್ರಕಟಿಸಿದ್ದು, ಸದರಿ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಘಟಕಗಳನ್ನು ಹಂಚಿಕೆ ಮಾಡಿ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಯನ್ನು ಪ್ರಾರಂಭಿಸಲಾಗಿತ್ತು.

ಆದರೆ ಎ.ಡಿ.ಜಿ.ಪಿ, ನೇಮಕಾತಿ ಮತ್ತು ತರಬೇತಿ, ಬೆಂಗಳೂರು ರವರ ಪತ್ರ ಸಂಖ್ಯೆ: 98/ನೇಮಕಾತಿ 2/2020-21 ದಿನಾಂಕ: 21.01.2022 - ಪತ್ರದಯ ಆಡಳಿತಾತ್ಮಕ ಕಾರಣದಿಂದಾಗಿ ಪ್ರಸ್ತುತ ಸವರಿ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿಗಳ ಪರಿಶೀಲನೆಯನ್ನು ಹಾಗೂ ನೇಮಕಾತಿ ಆದೇಶ ಹೊರಡಿಸಿರುವುದನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕೆಂದು ಕೋರಲಾದ ಕಾರಣ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಯನ್ನು ಸ್ಥಗಿತಗೊಳಿಸಲಾಗಿದೆ.

ಮುಂದುವರೆದು, ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯ ಅತಂತ್ರದಲ್ಲಿದ್ದು, ಈ ಕೂಡಲೇ ತಾತ್ಕಾಲಿಕ ಸ್ಥಗಿತವನ್ನು ತೆರವುಗೊಳಿಸಿ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿಗಳ ಪರಿಶೀಲನೆಯನ್ನು ನಡೆಸಿ ನೇಮಕಾತಿ ಆದೇಶ ಕೊಡಿಸುವಂತೆ ಅತಂತ್ರಗೊಂಡ ಅಭ್ಯರ್ಥಿಗಳ ವಿನಂತಿಯಾಗಿರುತ್ತದೆ ಹಾಗೂ ಯಾವ ಕಾಲಮಿತಿಯೊಳಗೆ ತಾತ್ಕಾಲಿಕ ಸ್ಥಗಿತವನ್ನು ತೆರವುಗೊಳಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗುತ್ತೆ ಎಂಬ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳಿಂದ ಉತ್ತರ ಬಯಸಿ ಸದನದಲ್ಲಿ ಈ ಮೇಲ್ಕಂಡ ವಿಷಯವನ್ನು ಪ್ರಸ್ತಾಪಿಸಲು ಅನುಮತಿ ಕೋರುತ್ತೇನೆ.

ಉತ್ತರ ಸರ್ಕಾರದ

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) 545 (43, ಎಸ್‌ಕೆಕೆ ಮತ್ತು 107 ಕೆಕೆ) ಹುದ್ದೆಗಳ ನೇಮಕಾತಿ ಸಲುವಾಗಿ ಅಧಿಸೂಚನೆ ಸಂಖ್ಯೆ: 98/ನೇಮಕಾತಿ-2/2020-21 ನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 21.01.2021 ರಂದು ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ. ಸದರಿ ನೇಮಕಾತಿಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಮುದ್ದೆಗಳಿಗೆ ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 1 ಹೈಕಕೋ 2018, ದಿನಾಂಕ: 06.06.2020 ರನ್ವಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ದಿನಾಂಕ: 19.01.2022 ರಂದು ಪ್ರಕಟಿಸಲಾಗಿರುತ್ತವೆ.

ಮೇಲ್ಕಂಡಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ನಂತರ ಕಾಣ ಕರ್ನಾಟಕ ಪ್ರದೇಶದ ಕೆಲವು ಆಭ್ಯರ್ಥಿಗಳು ಹಾಗೂ ಇನ್ನಿತರರು ಸರ್ಕಾರದ ಸುತ್ತೋಲೆ ದಿನಾಂಕ: 06.06.2020 . ಮತ್ತು ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ/ಮನವಿಗಳನ್ನು ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಒಇ 21 ಪಿಇಐ 2022, ದಿನಾಂಕ: 15.02.2022ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಡಿಜಿ ಮತ್ತು ಬಿಜೆಪಿ ಹಾಗೂ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರವರುಗಳನ್ನೊಳಗೊಂಡಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿರುತ್ತವೆ. ಈ ಸಮಿತಿಯು 545 ಪಿ.ಎಸ್.ಐ ಮುದ್ದೆಯ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿಆಸು ಇಲಾಖೆಯು ಕಾಲಕಾಲಕ್ಕೆ ಹೊರಡಿಸಿರುವ ಸುತ್ತೋಲೆಗಳನ್ವಯ ಪರಿಶೀಲಿಸಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆಯೆ? ಎಂಬ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ನಂತರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸಂಖ್ಯೆ: ಒಇ 26 ಪಿಇಐ 2022

(ಆರಗ ಜ್ಞಾನೇಂದ್ರ) ಗೃಹ ಸಚಿವರು
 

No comments

Powered by Blogger.