Kpscvani

educational ,employment ,health,sports,political news and other information


Thursday, February 24, 2022

GPT RECRUITMENT 2022 NOTIFICATION RELEASED

  shekharagouda       Thursday, February 24, 2022
🔘 ವಿಶೇಷ ನಿಯಮಗಳು 🔵

👉 1. ಶೀರ್ಷಿಕೆ ಪ್ರಾರಂಭ ಮತ್ತು ಅನ್ವಯ:

(1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2022 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ರಾಜ್ಯ ಸರ್ಕಾರದ ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ ಜಾರಿಗೊಳಿಸತಕ್ಕದ್ದು. (3) ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ಅಥವಾ ಕರ್ನಾಟಕ

ಶಿಕ್ಷಣ ಇಲಾಖೆಯ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು 1967delta_{\theta} ಅಥವಾ ಕರ್ನಾಟಕ ರಾಜ್ಯ ನಾಗರಿಕ ಸೇವಾ ಕಾಯಿದೆ 1978 (1990 ರ ಕರ್ನಾಟಕ ಕಾಯಿದೆ 14) ಅಡಿಯಲ್ಲಿ ಮಾಡಿದ ಅಥವಾ ಮಾಡಲಾಗಿದೆ ಎಂದು ಪರಿಗಣಿಸಲಾದ ಶೆಡ್ಯೂಲ್‌ನಲ್ಲಿ (Shedule) ನಿರ್ದಿಷ್ಟಪಡಿಸಿದ ಹುದ್ದೆಗಳ ವರ್ಗಗಳಿಗೆ ಸಂಬಂಧಿಸಿದ ಯಾವುದೇ ಇತರೆ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಈ ನಿಯಮಗಳಲ್ಲಿ ಯಾವುದೂ ಒಂದಕ್ಕಿಂತ ಹೆಚ್ಚು ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ.

👉 2. ವ್ಯಾಖ್ಯೆಗಳು:- (1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು (ಎ) ನೇಮಕಾತಿ ಪ್ರಾಧಿಕಾರ' ಎಂದರೆ, ಆಯಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ರವರು.

(ಬಿ) “ಪರೀಕ್ಷಾ ಪ್ರಾಧಿಕಾರ” ಎಂದರೆ, ಸರ್ಕಾರದ ಆದೇಶದ ಸಂಖ್ಯೆ: ಇಡಿ 399 ಪಿಬಿಎಸ್‌ 2017(2) ದಿನಾಂಕ:22.08.2017 ರ ಪ್ರಕಾರ ಕೇಂದ್ರೀಕೃತ ದಾಖಲಾತಿ ಘಟಕ, 3^ prime .25 ರಸ್ತೆ,

ಬೆಂಗಳೂರು ರವರು.

👉 (ಸಿ) “ಅರ್ಹತಾ ಪರೀಕ್ಷೆ” ಎಂದರೆ ಶೆಡ್ಯೂಲ್ ನಲ್ಲಿ ನೇಮಕಾತಿಗೆ ನಿರ್ದಿಷ್ಟಪಡಿಸಿದ ಹುದ್ದೆಗೆ ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆ.

👉 (ಡಿ) ಶೆಡ್ಯೂಲ್' ಎಂದರೆ ಸದರಿ ನಿಯಮಗಳಿಗೆ ಲಗತ್ತಿಸಲಾದ ವಿವರಗಳ ಪಟ್ಟಿ.

👉 (ಇ) “ಖಾಲಿಹುದ್ದೆಗಳು" ಈ ನಿಯಮಗಳ ಅಡಿಯಲ್ಲಿ ಭರ್ತಿ ಮಾಡಬೇಕಾದ ಕೋಷ್ಟಕ (ಶೆಡ್ಯೂಲ್) ದಲ್ಲಿ ನಿರ್ದಿಷ್ಟಪಡಿಸಿದ ಖಾಲಿ ಹುದ್ದೆಗಳ ಸಂಖ್ಯೆ.

(2) ಈ ನಿಯಮಗಳಲ್ಲಿ ಬಳಸಲಾದ ಆದರೆ ವ್ಯಾಖ್ಯಾನಿಸದ ಪದಗಳು ಮತ್ತು ಅಭಿವ್ಯಕ್ತಿಗಳು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಅಥವಾ ಕರ್ನಾಟಕ ಶಿಕ್ಷಣ ಇಲಾಖೆಯ ಸೇವೆಗಳಲ್ಲಿ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು 1967 v*e_{m} ಅದೇ ಅರ್ಥವನ್ನು ಹೊಂದಿವೆ.

👉 3. Baines:

ಅಭ್ಯರ್ಥಿಯು w sim overline sq

21 ವರ್ಷ ಪೂರೈಸಿರಬೇಕು

ಕೆಳಕಂಡ ವಯೋಮಿತಿಯನ್ನು ಮೀರಿರಬಾರದು.

ಮತ್ತು

(i) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 47 ವರ್ಷ ಮೀರಿರಬಾರದು.

(ii) ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು. ಸಾಮಾನ್ಯ (others) ಅಭ್ಯರ್ಥಿಗಳಿಗೆ 42 ವರ್ಷ ಮೀರಿರಬಾರದು.

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 6 ರ ಉಪ ನಿಯಮ (2) ಮತ್ತು (3) ರಲ್ಲಿ ಒದಗಿಸಲಾದ ವಯಸ್ಸಿನ ಮಿತಿಯ ಸಡಿಲಿಕೆಯು ಈ ನಿಯಮಗಳ ಅಡಿಯಲ್ಲಿ ನೇಮಕಾತಿಗೆ ಅನ್ವಯಿಸುತ್ತದೆ.

👉 4.ಪರೀಕ್ಷಾ ಪ್ರಾಧಿಕಾರ:- ಕೇಂದ್ರೀಕೃತ ದಾಖಲಾತಿ ಘಟಕ, ಬೆ೦ಗಳೂರು ಪ್ರಾಧಿಕಾರವಾಗಿದ್ದು, ಕೆಳಕಂಡ ಸಲಹಾ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

(i) ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ - ಅಧ್ಯಕ್ಷರು

(ii) ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಸಾರ್ವಜನಿಕ ಶಿಕ್ಷಣ ಇಲಾಖೆ - pi omega pi j phi ;

(iii) ನಿರ್ದೇಶಕರು (ಪ್ರೌಢ ಶಿಕ್ಷಣ) ಸಾರ್ವಜನಿಕ ಶಿಕ್ಷಣ ಇಲಾಖೆ - ಸದಸ್ಯರು;

(iv) ನಿರ್ದೇಶಕರು ಡಿ.ಎಸ್.ಇ.ಆರ್.ಟಿ- ಸದಸ್ಯರು; (v) ವಿಶೇಷಾಧಿಕಾರಿಗಳು, ಕೇಂದ್ರೀಕೃತ ದಾಖಲಾತಿ ಘಟಕ - ಸದಸ್ಯ ಕಾರ್ಯದರ್ಶಿ

(vi) ರಾಜ್ಯ ಮಾಹಿತಿ ಅಧಿಕಾರಿ, NIC ಬೆಂಗಳೂರು - ಸದಸ್ಯರು

(vii) ಉಪನಿರ್ದೆಶಕರು (ಪ್ರಾಥಮಿಕ ಶಿಕ್ಷಣ) ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ,

ಬೆಂಗಳೂರು – ಸದಸ್ಯರು; ಮತ್ತು (viii) ಆಯುಕ್ತರಿಂದ ನಾಮನಿರ್ದೇಶಿತರಾದ ಇಬ್ಬರು DIET ಪ್ರಾಂಶುಪಾಲರು ಮತ್ತು ಇಬ್ಬರು ಜಿಲ್ಲಾ ಉಪನಿರ್ದೇಶಕರು (ಆಡಳಿತ) - ಸದಸ್ಯರು

👉 5. ನೇಮಕಾತಿ ವಿಧಾನ: ನಿಯಮಗಳ ಅಡಿಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಆಯ್ಕೆ

ಪ್ರಾಧಿಕಾರವು ಕೆಳಗೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಮಾಡಲಾಗುತ್ತದೆ.

(ಎ) ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಕ್ರಮ ಸಂಖ್ಯೆ 6- infty \sigma(i) ರಿಂದ (iii) ಕಾಲಂ 2 ರಲ್ಲಿನ ವರ್ಗದ ಹುದ್ದೆಗಳಿಗೆ ಹಾಗೂ ಬೋಧನಾ ಮಾಧ್ಯಮಾನುಸಾರ ಪ್ರತಿ ಜಿಲ್ಲೆಯಲ್ಲಿ ಲಭ್ಯ ಖಾಲಿ ಹುದ್ದೆಗಳನ್ನು ಪರಿಗಣಿಸಿ ಆಯಾ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಅಥವಾ ತತ್ಸಮಾನ ವೃಂದದ ಅಧಿಕಾರಿಗಳು ಸರ್ಕಾರದ ಪರವಾಗಿ (ಇನ್ನು ಮುಂದೆ ಆಯ್ಕೆ ಪ್ರಾಧಿಕಾರ ಎಂಬುದಾಗಿ ತಿಳಿಯತಕ್ಕದ್ದು) ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸುವುದು ಹಾಗೂ ವ್ಯಾಪಕ ಪ್ರಸಾರವುಳ್ಳ ಕನಿಷ್ಟ ಪ್ರಮುಖ 02 ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಅರ್ಹ ಅಭ್ಯರ್ಥಿಗಳಿಂದ ನಿಗದಿತ ಶುಲ್ಕದೊಂದಿಗೆ ನೇಮಕಾತಿಗಾಗಿ ನಿಯಮಾವಳಿಯನ್ವಯ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು.

(ಬಿ) ಆಯ್ಕೆ ಪ್ರಾಧಿಕಾರವು ಪರೀಕ್ಷಾ ಪ್ರಾಧಿಕಾರದ ನೆರವಿನೊಂದಿಗೆ ಸರ್ಕಾರವು ನಿರ್ದಿಷ್ಟಪಡಿಸುವ ಕಾರ್ಯ ವಿಧಾನಕ್ಕೆ ಅನುಗುಣವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವುದು. ಆಯ್ಕೆ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪಠ್ಯಕ್ರಮ, ದಿನಾಂಕ, ಸಮಯ ಮತ್ತು ಸ್ಥಳ ಮುಂತಾದ ಅಗತ್ಯ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕು.

(ಸಿ) ಕರ್ನಾ ಶಿಕ್ಷಣ ಇಲಾಖೆಯ ಸೇವೆಗಳ ರ್ಕಜನಿಕ ಶಿಕ್ಷಣ ಇಲಾಖೆ) ನಿಯಮಗಳು

1967 ರ ಶೆಡ್ಯೂಲ್ ನ ಕಾಲಂ 2 ರ ಕ್ರಮ ಸಂಖ್ಯೆ 66-ಎ ರಲ್ಲಿ ನಿರ್ದಿಷ್ಟಪಡಿಸಲಾದ (i) ರಿಂದ (iii) ರ ವರೆಗಿನ ಸಂಬಂಧಪಟ್ಟ ಮೂರು ವರ್ಗದ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ವಿವಿಧ ಬೋಧನಾ ಮಾಧ್ಯಮಗಳಿಗೆ ಸರ್ಕಾರದಿಂದ ಅಧಿಸೂಚಿಸಲಾಗುವಂತೆ ಹೆಚ್ಚುವರಿ ಪತ್ರಿಕೆಗಳು ಅಥವಾ ವಿಭಾಗಗಳನ್ನು ಒಳಗೊಂಡಿರಬಹುದಾಗಿದೆ.

👉 6. ಆಯ್ಕೆಯ ಮಾನದಂಡ :

(1) ಆಯ್ಕೆ ಪ್ರಾಧಿಕಾರವು ನೇಮಕಾತಿಗೆ ವಿಷಯವಾರು ಮತ್ತು ಮಾಧ್ಯಮವಾರು ಹಾಗೂ ಪ್ರವರ್ಗವಾರು ಅಧಿಸೂಚಿಸಿದ ಹುದ್ದೆಗಳಿಗೆ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ, ಪದವಿ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣ ಕೋರ್ಸ್‌ನಲ್ಲಿ ಪಡೆದ ಶೇಕಡವಾರು ಅಂಕಗಳ ಆಧಾರದ ಮೇಲೆ ಈ ಕೆಳಗೆ ವಿವರಿಸಿದಂತೆ ವೇಯಿಟೇಜ್ (Weightage) ಉಪಯೋಗಿಸಿ, ಲೆಕ್ಕಹಾಕಿ Derived percentage ನ ಆಧಾರದ ಮೇಲೆ ಪ್ರತ್ಯೇಕವಾಗಿ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.

(ಎ) Derived percentage ಲೆಕ್ಕಹಾಕಲು ಅಭ್ಯರ್ಥಿಯು ಡಿಪ್ಲೋಮಾ ಇನ್ ಎಲಿಮೆಂಟರಿ ಎಜುಕೇಷನ್ ಅಥವಾ ಬಿ.ಇಡಿ, ಡಿಪ್ಲೋಮ ಇನ್ ಸ್ಪೆಷಲ್ ಎಜುಕೇಷನ್ ಅಥವಾ ಬಿ.ಇಡಿ (ಸ್ಪೆಷಲ್ ಎಜುಕೇಷನ್) ವಿದ್ಯಾರ್ಹತೆ ಹೊಂದಿದ್ದಲ್ಲಿ ಈ ಮುಂದಿನಂತೆ ವೇಯಿಟೇಜ್ (Weightage) ಅನ್ನು ಶೇಕಡವಾರು ಪರಿಗಣಿಸುವುದು.

(i) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ 0,50,

(ii) ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ 0.20.

(iii) ಪದವಿಯಲ್ಲಿ ಪಡೆದ ಅಂಕಗಳ

0.20.

(iv) ಶಿಕ್ಷಕರ ಶಿಕ್ಷಣ ಕೋರ್ಸ್‌ನಲ್ಲಿ ಪಡೆದ ಅಂಕಗಳ 0.10,

(ಬಿ) Derived percentage ಲೆಕ್ಕಹಾಕಲು ಅಭ್ಯರ್ಥಿಯು ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಪದವಿಯನ್ನು ಹೊಂದಿದ್ದಲ್ಲಿ ಈ ಮುಂದಿನಂತೆ ವೇಯಿಟೇಜ್ (Weightage) ಅನ್ನು ಶೇಕಡವಾರು ಪರಿಗಣಿಸುವುದು.

(i) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ

ಅಂಕಗಳ 0.50.

(ii) ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ 0.20. (iii) ನಾಲ್ಕು ವರ್ಷಗಳ ಬಿ.ಎಲ್.ಇಡಿ. ಅಥವಾ 190/2902 ಇಡಿ ಅಥವಾ ಬಿಎ.ಇಡಿ. ಬಿಎಸ್ಪಿ.ಇಡಿ ಪದವಿಯಲ್ಲಿ ಪಡೆದ ಅಂಕಗಳ 0.30,

(2) ಮೇಲೆ ಹೇಳಿದ ಪ್ರಕಾರ ವೆಯಿಟೇಜ್‌ನ್ನು ಲೆಕ್ಕ ಹಾಕಿದಾಗ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನ Derived percentage ಅಂಕಗಳನ್ನು ಪಡೆದಲ್ಲಿ ವಯಸ್ಸನ್ನು ಆಧರಿಸಿ ವಯಸ್ಸಿನಲ್ಲಿ ಹಿರಿಯರಾದವನ್ನು ಮೆರಿಟ್ ಪಟ್ಟಿಯಲ್ಲಿ ವಯಸ್ಸಿನಲ್ಲಿ ಕಿರಿಯರಿಗಿಂತ ಮೊದಲು ಪರಿಗಣಿಸುವುದು.

👉 7. ಹುದ್ದೆಗಳ ಮೀಸಲಾತಿ:

ಹುದ್ದೆಗಳ ಮೀಸಲಾತಿಯು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 9 ರಲ್ಲಿನ ಪ್ರಮಾಣಾನುಸಾರ ಮತ್ತು ಕಾಲ ಕಾಲಕ್ಕೆ ಹೊರಡಿಸಲಾಗುವ ಕಾನೂನುಗಳು, ನಿಯಮಗಳು, ಹಾಗೂ ಕೆಳಕಂಡ ಜಾರಿಯಲ್ಲಿರುವ ಸರ್ಕಾರದ ಆದೇಶಗಳನ್ನು ಒಳಗೊಂಡಂತೆ ಇರುತ್ತದೆ. i) ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿಗಳಿಗೆ ಪ್ರಸ್ತುತ

ಜಾರಿಯಲ್ಲಿರುವ ರಾಜ್ಯ ಸರ್ಕಾರದ ಮೀಸಲಾತಿ ನಿಯಮಗಳು: ii) ಕರ್ನಾಟಕ ಗ್ರಾಮೀಣ ಅಭ್ಯರ್ಥಿಗಳಿಗಾಗಿ (ರಾಜ್ಯ ಸಿವಿಲ್ ಸೇವೆಗಳಲ್ಲಿ) ನೇಮಕಾತಿ ಅಥವಾ ಹುದ್ದೆಗಳ ಮೀಸಲಾತಿ ಅಧಿನಿಯಮ 2000;

iii) ಕರ್ನಾಟಕ ನಾಗರೀಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳು-1977 ನಿಯಮ-9 ಪ್ರಕಾರ ವಿಕಲಚೇತನರು ಹಾಗೂ ಮಾಜಿ ಸೈನಿಕರು, ನಿಗದಿಪಡಿಸಿರುವ ಪ್ರಮಾಣದಲ್ಲಿ:

iv) ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 252 ಎಸ್‌ಆರ್‌ಆರ್ 2020(P-1) ದಿನಾಂಕ: 07.07.2021 ರನ್ವಯ ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ: v) ಪ್ರತಿ ಪ್ರವರ್ಗಗಳಲ್ಲಿ ಶೇ. 50 ಕ್ಕಿಂತ ಕಡಿಮೆ ಇಲ್ಲದಂತೆ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡುವುದು.

ಮತ್ತು

vi) ಪ್ರತಿ ಪ್ರವರ್ಗಗಳಲ್ಲಿ ಶೇ.1 vec sigma hat theta overline phi ಕಡಿಮೆ ಇಲ್ಲದಂತೆ ಹುದ್ದೆಗಳನ್ನು ತೃತೀಯಲಿಂಗದ (Transgender) ಅಭ್ಯರ್ಥಿಗಳಿಂದ ಭರ್ತಿ ಮಾಡುವುದು.

👉 8. ಆಯ್ಕೆ ಪಟ್ಟಿ:

(1) ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಮುನ್ನ ಆಯ್ಕೆ ಪ್ರಾಧಿಕಾರವು ಅಧಿಸೂಚಿತ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅಧಿಸೂಚಿಸಿದ ಹುದ್ದೆಗಳ ಸಂಖ್ಯೆಯ ಎರಡರಷ್ಟರವರೆಗಿನ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ದಾಖಲಾತಿ ಪರಿಶೀಲನೆ ಉದ್ದೇಶಕ್ಕಾಗಿ ಕರೆಯುವುದು. (2) ದಾಖಲಾತಿಗಳ ಪರಿಶೀಲನೆಯ ನಂತರ ಆಯ್ಕೆ ಪ್ರಾಧಿಕಾರವು ಅಧಿಸೂಚಿಸಿದ್ದ ಹುದ್ದೆಗಳ ಸಂಖ್ಯೆಗೆ

ಸಮನಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದು, (3) ತದನಂತರ, ತಾತ್ಕಾಲಿಕ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳು ಸ್ವೀಕೃತಗೊಂಡಲ್ಲಿ ಪರಿಶೀಲಿಸಿ, ಸೂಕ್ತ ಆಕ್ಷೇಪಣೆಗಳಿದ್ದಲ್ಲಿ ಪರಿಗಣಿಸಿ ಅಧಿಸೂಚಿಸಿದ ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಮುಖ್ಯ ಪಟ್ಟಿಯನ್ನು ಪ್ರಕಟಿಸುವುದು.

(4) ಆಯ್ಕೆ ಪ್ರಾಧಿಕಾರವು ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳು ಯಾವ ನಿರ್ದಿಷ್ಟ ಹುದ್ದೆಗೆ ಆಯ್ಕೆಯನ್ನು ಬಯಸುತ್ತಾರೊ ಸಾಧ್ಯವಾದಷ್ಟು ಮಟ್ಟಿಗೆ ಅಂತಹ ಆಯ್ಕೆಯನ್ನು ಪರಿಗಣಿಸುವುದು. ಮೇಲ್ಕಂಡ ವಿಧಾನದಲ್ಲಿ ಸಿದ್ಧಪಡಿಸಲಾದ ಮುಖ್ಯ ಪಟ್ಟಿಗೆ ಸೇರಲ್ಪಟ್ಟ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯ ಕ್ರಮ ಸಂಖ್ಯೆಯ ಅನುಕ್ರಮವಾಗಿ ಅಗತ್ಯವಿರುವ ಪರಿಶೀಲನೆಯ ರೀತಿಯಲ್ಲೂ ಅರ್ಹರಾದ ಪರಿಗಣಿಸುವುದು. ಅಭ್ಯರ್ಥಿಗಳನ್ನು ನ೦ತರ ಎಲ್ಲಾ ನೇಮಕಾತಿ ಪ್ರಾಧಿಕಾರದಿಂದ 30c^ ನೇಮಕಾತಿಗೆ (5)

👉 9. ಹೆಚ್ಚುವರಿ ಪಟ್ಟಿ:

(1) ನೇಮಕಾತಿ ಪ್ರಾಧಿಕಾರವು ನಿಯಮ 8 ರ ಅಡಿಯಲ್ಲಿ ಸಿದ್ಧಪಡಿಸಿದ ಆಯ್ಕೆ ಪಟ್ಟಿಯ ರೀತಿಯಲ್ಲಿ, ಮುಖ್ಯ ಆಯ್ಕೆ ಪಟ್ಟಿಯಲ್ಲಿ ಸೇರಿಸದ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಬೇಕು. ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ನಿರ್ದಿಷ್ಟ ಅಥವಾ ವಿಷ್ಕೃತ ಅವಧಿಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಸಂದರ್ಭದಲ್ಲಿ ನೇಮಕಾತಿ ಪ್ರಾಧಿಕಾರವು ಈ ರೀತಿ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಿಂದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಬಹುದು. ಅಂತಹ ಸಂದರ್ಭದಲ್ಲಿ ಹೆಚ್ಚುವರಿ ಪಟ್ಟಿಯಿಂದ ನೇಮಕಾತಿ ಆದೇಶಗಳನ್ನು ನೀಡಬೇಕಾದ ಅಭ್ಯರ್ಥಿಯು ಅಂತಿಮ ಪಟ್ಟಿಯಲ್ಲಿದ್ದು, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಅಭ್ಯರ್ಥಿಯು ಸೇರಿದ ಅದೇ ವರ್ಗದ, ನೇರ ಮತ್ತು ಸಮತಳ ಮೀಸಲಾತಿಗೆ ಸೇರಿದ ಅಭ್ಯರ್ಥಿಯಾಗಿರಬೇಕು.

👉 (2) ಉಪನಿಯಮ (1) ರಡಿಯಲ್ಲಿ ಸಿದ್ಧಪಡಿಸಲಾದ ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕಾದ ಒಟ್ಟು ಅಭ್ಯರ್ಥಿಗಳ ಸಂಖ್ಯೆಯು ನಿಯಮ 8 ರ ಅಡಿಯಲ್ಲಿ ತಯಾರಿಸಲಾದ ಪಟ್ಟಿಯಲ್ಲಿ ಸೇರಿದ ಅಭ್ಯರ್ಥಿಗಳ ಒಟ್ಟು ಸಂಖ್ಯೆಯ ಶೇಕಡಾ ಇಪ್ಪತ್ತನ್ನು (20%) ಮೀರಿರಬಾರದು.

(3) ನೇಮಕಾತಿ ಪ್ರಾಧಿಕಾರವು ಉಪ-ನಿಯಮ (1) ರ ಅಡಿಯಲ್ಲಿ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯು ಅದೇ ಹುದ್ದೆಗೆ ಮುಂದಿನ ನೇಮಕಾತಿ ಅಧಿಸೂಚನೆ ಹೊರಡಿಸುವವರೆಗೆ ಅಥವಾ ಪ್ರಕಟಣೆಯ ದಿನಾಂಕದಿಂದ 02 ವರ್ಷ ಅವಧಿ ಇವುಗಳಲ್ಲಿ ಯಾವುದು ಮೊದಲು ಘಟಿಸುವುದೋ ಅಲ್ಲಿಯವೆರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

(4) ಒಂದು ವೇಳೆ ನೇಮಕಾತಿ ಪ್ರಾಧಿಕಾರವು ಮುಖ್ಯ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ನೇಮಕಾತಿ ಆದೇಶವನ್ನು ನೀಡಿದ್ದು, ಆ ಅಭ್ಯರ್ಥಿಯು ನಿಗದಿತ ಸಮಯದೊಳಗೆ ನೇಮಕಗೊಂಡ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದಿದ್ದಲ್ಲಿ ಮತ್ತು ಅಂತಹ ಅಭ್ಯರ್ಥಿಯ ಮಟ್ಟಿಗೆ, ಉಪನಿಯಮ (1) ರಂತೆ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಲ್ಲಿರುವ ಅಭ್ಯರ್ಥಿಯನ್ನು ನೇಮಕ ಮಾಡಬಹುದಾಗಿದೆ.

👉 10. ಅಭ್ಯರ್ಥಿಗಳ ನೇಮಕಾತಿ:

(1) ನಿಯಮ 8 ರ ಅಡಿಯಲ್ಲಿ ಸಿದ್ದಪಡಿಸಲಾದ ಮುಖ್ಯ ಪಟ್ಟಿಗೆ ಸೇರಲ್ಪಟ್ಟ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯ ಕ್ರಮ ಸಂಖ್ಯೆಯ ಅನುಕ್ರಮವಾಗಿ ಅಗತ್ಯವಿರುವ ಪರಿಶೀಲನೆಯ ನಂತರ ಎಲ್ಲಾ ರೀತಿಯಲ್ಲೂ ಅರ್ಹರಾದ ಅಭ್ಯರ್ಥಿಗಳನ್ನು ನೇಮಕಾತಿ ಪ್ರಾಧಿಕಾರದಿಂದ ನೇಮಕಾತಿಗೆ ಪರಿಗಣಿಸಲಾಗುವುದು.

(2) ನಿಯಮ 8 ರ ಅಡಿಯಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಸೇರಲ್ಪಟ್ಟ ಮಾತ್ರಕ್ಕೆ ಅಭ್ಯರ್ಥಿಯು ನೇಮಕಾತಿಗೆ ಹಕ್ಕನ್ನು ಪಡೆದುಕೊಳ್ಳುವುದಿಲ್ಲ.

👉 11. ಅನ್ವಯವಾಗುವ ಇತರೆ ನಿಯಮಗಳು:

ಕರ್ನಾಟಕ ನಾಗರಿಕ ಸೇವೆಗಳು (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957, ಕರ್ನಾಟಕ ನಾಗರಿಕ ಸೇವೆಗಳು (ನಡತೆ) ನಿಯಮಗಳು 2021, ಮತ್ತು ಇತರೆ ಎಲ್ಲಾ ನಿಯಮಗಳು, ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ರಾಜ್ಯ ನಾಗರಿಕ ಸೇವಾ ಕಾಯಿದೆ 1978 ರ ಅಡಿಯಲ್ಲಿ ಸರ್ಕಾರಿ ನೌಕರರ ಸೇವಾ ಷರತ್ತುಗಳನ್ನು ನಿಯಂತ್ರಿಸುವ ಅಥವಾ ಮಾಡಲಾಗಿದೆ ಎಂದು ಭಾವಿಸಲಾಗಿರುವ (1990 ರ ಕರ್ನಾಟಕ ಕಾಯಿದೆ 14) ಅಂತಹ ನಿಯಮಗಳು ಈ ನಿಯಮಗಳ ನಿಬಂಧನೆಗಳಿಗೆ ಅಸಮಂಜಸವಾಗಿರದಿದ್ದಲ್ಲಿ ಈ ನಿಯಮಗಳ ಅಡಿಯಲ್ಲಿ ಆಯ್ಕೆ ಮಾಡಿದ ಮತ್ತು ನೇಮಕಗೊಂಡ ವ್ಯಕ್ತಿಗಳಿಗೆ ಅನ್ವಯಿಸುತ್ತದೆ.

ಸಂಪೂರ್ಣ ಸರ್ಕಾರದ ಅಧಿಸೂಚನೆ ನೋಡಲು ಕೆಳಗಿನ ಲಿಂಕ್  ಒತ್ತಿ 
👇  👇  👇  👇  👇  👇  👇  👇  👇  👇  👇  👇
                   CLICK ON LINK
logoblog
Previous
« Prev Post

No comments:

Post a Comment