Wednesday, May 4, 2022

Davanagere DCC Bank Recruitment 2022

  Wednesday, May 4, 2022
                         ಪ್ರಕಟಣೆ

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ದಾವಣಗೆರೆ ಇದರಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ (ONLINE) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛೆಯುಳ್ಳ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್ www.ddccbank.co.in ನಲ್ಲಿ ನೀಡಿರುವ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ/ಅಂಚೆ/ ಕೊರಿಯರ್ ಇತ್ಯಾದಿ ಮೂಲಕ ಕಳುಹಿಸಲು ಅವಕಾಶವಿರುವುದಿಲ್ಲ. 

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 01-06-2022ರ ರಾತ್ರಿ 11-59ರವರೆಗೆ ಇರುತ್ತದೆ.

 ನೇಮಕಾತಿ ಮಾಡಲು ಉದ್ದೇಶಿಸಿರುವ 48 ವಿವಿಧ ಹುದ್ದೆಗಳನ್ನು ಸರ್ಕಾರಿ ಆದೇಶದ ಪ್ರಕಾರ ಈ ಕೆಳಕಂಡಂತೆ ವರ್ಗೀಕರಿಸಿ ಮೀಸಲಿರಿಸಲಾಗಿದೆ.

1) ಕಿರಿಯ ಸಹಾಯಕರು/ಕಿರಿಯ ಕ್ಷೇತ್ರಾಧಿಕಾರಿಗಳು:

1. ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

2. ಕಂಪ್ಯೂಟರ್ ಹಾಗೂ ಸಹಕಾರ ವಿಷಯದಲ್ಲಿ ಅಧ್ಯಯನ, ಜ್ಞಾನ ಮತ್ತು ಅನುಭವ ಪಡೆದವರಿಗೆ ಆಧ್ಯತೆ ನೀಡಲಾಗುವುದು.

3. ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಭಾಷಾ ಪರಿಜ್ಞಾನ ಹಾಗೂ ಕಂಪ್ಯೂಟರ್ ಪರಿಜ್ಞಾನ (ನಿರ್ವಹಣೆ)

ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.

2) ಕಂಪ್ಯೂಟರ್‌ ಇಂಜಿನಿಯರ್ :

1. ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಕಂಪ್ಯೂಟರ್ ಪ್ರೊಗ್ರಾಮರ್‌, ಬಿ.ಇ. ಸಿ.ಎಸ್., ಇ&ಸಿ, ಮತ್ತು ಇ&ಇ ಇಂಜಿನಿಯರಿಂಗ್/ಎಂ.ಸಿ.ಎ. ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

2. ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಭಾಷಾ ಪರಿಜ್ಞಾನ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ. ಕಂಪ್ಯೂಟರ್ ಪರಿಜ್ಞಾನ, ನಿರ್ವಹಣೆ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.

3) ಕಂಪ್ಯೂಟರ್ ಆಪರೇಟರ್

1. ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷದ ಡಿಪ್ಲೋಮಾ ಇನ್

ಕಮಿರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಉತ್ತೀರ್ಣರಾಗಿರಬೇಕು.

2. ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಮಾಡಲು ಕಂಪ್ಯೂಟರ್ ಜ್ಞಾನ ಹೊಂದಿರುವ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಬೇಕು/ ಸಲ್ಲಿಸಬೇಕು.

3. ಕನ್ನಡ ಭಾಷೆ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರತಕ್ಕದ್ದು.

4) ವಾಹನ ಚಾಲಕರು.

1. ಕನಿಷ್ಠ 10 ನೇ ತರಗತಿ/ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಊರ್ಜಿತ ಲಘು ವಾಹನ ಚಾಲನೆಯ ಲೈಸೆನ್ಸ್, ಬ್ಯಾಡ್ಜ್ ಹೊಂದಿರತಕ್ಕದ್ದು.

2. ಕನ್ನಡ ಭಾಷೆ ಕಡ್ಡಾಯವಾಗಿ ಕಲಿತಿರತಕ್ಕದ್ದು.

5) ಕಿರಿಯ ಸೇವಕರು (ಅಟೆಂಡರ್) :

1. ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು.

2. ಅಭ್ಯರ್ಥಿಗಳು ಕನ್ನಡ ಭಾಷೆ ಕಡ್ಡಾಯವಾಗಿ ಕಲಿತಿರತಕ್ಕದ್ದು.
logoblog

Thanks for reading Davanagere DCC Bank Recruitment 2022

Previous
« Prev Post

No comments:

Post a Comment