Kpscvani

educational ,employment ,health,sports,political news and other information


Monday, June 20, 2022

Anganawadi Recruitment 2022

  shekharagouda       Monday, June 20, 2022
   ಚಿತ್ರದುರ್ಗ ಜಿಲ್ಲೆಯ ಅಂಗನವಾಡಿ  ಅಧಿಸೂಚನೆ 

ಸರ್ಕಾರದ ಆದೇಶ ಸಂಖ್ಯೆ:ಮಮಅಇ/303/ಐಸಿಡಿ/2017, ದಿ:23-09-2017 ರಲ್ಲಿ ತಿಳಿಸಿರುವ ಮಾರ್ಗಸೂಚಿಯಂತೆ ಹಾಗೂ ಮಾನ್ಯ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಆಯ್ಕೆ ಸಮಿತಿ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆ ರವರ ಅನುಮೋದನೆಯಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 07 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 16 ಅಂಗನವಾಡಿ ಕಾರ್ಯಕರ್ತೆ ಹಾಗೂ 96 ಅಂಗನವಾಡಿ ಸಹಾಯಕಿಯರ ಗೌರವ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:18-06-2022ಆಗಿದ್ದು, ಕೊನೆಯ ದಿನಾಂಕ:18-07-2022ರಂದು ಸಂಜೆ:5.30 ರವರೆಗೆ

ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ: :www.anganwadirecruit.kar.nic.in

ಸೂಚನೆಗಳು:

1. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳನ್ನು ಆನ್‌ಲೈನ್‌ (Online) ನಲ್ಲಿ ಸಲ್ಲಿಸಬೇಕಾಗಿರುತ್ತದೆ.

2. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಇದರೊಂದಿಗೆ ಲಗತ್ತಿಸಿರುವ ನೇಮಕಾತಿ ಮಾರ್ಗಸೂಚಿ | ನಿಬಂಧನೆಗಳನ್ನು ಓದಿಕೊಂಡು ನಂತರ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು,

3. ಎಲ್ಲಾ ಅಗತ್ಯ ದಾಖಲಾತಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿರುತ್ತದೆ. ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :

1. ಅರ್ಜಿ ನಿಗದಿತ ನಮೂನೆಯಲ್ಲಿ ( ಆನ್‌ಲೈನ್ )

2. ಜನನ ಪ್ರಮಾಣ ಪತ್ರ / approx overline n 6 ದಿನಾಂಕವಿರುವ ಎಸ್.ಎಸ್.ಎಲ್.ಸಿ ಅಂಕಪಟ್ಟಿ

3. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (ಕಾರ್ಯಕರ್ತೆ ಹುದ್ದೆಗೆ ಎಸ್‌.ಎಸ್.ಎಲ್.ಸಿ ಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರು ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರುವ ಅಂಕಪಟ್ಟಿಯನ್ನು ಮಾತ್ರ ಲಗತ್ತಿಸುವುದು, ಹೆಚ್ಚಿನ ವಿದ್ಯಾರ್ಹತೆಯ ಅಂಕಪಟ್ಟಿ ಪರಿಗಣಿಸುವುದಿಲ್ಲ)

4. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ (ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ಉತ್ತೀರ್ಣ ಗರಿಷ್ಠ 9 ನೇ ತರಗತಿ ಉತ್ತೀರ್ಣ ಅಂಕಪಟ್ಟಿ ಮಾತ್ರ ಲಗತ್ತಿಸುವುದು, ಹೆಚ್ಚಿನ ವಿದ್ಯಾರ್ಹತೆಯ ಅಂಕಪಟ್ಟಿ ಪರಿಗಣಿಸುವುದಿಲ್ಲ). 
logoblog
Previous
« Prev Post

No comments:

Post a Comment