Saturday, July 16, 2022

Rishi Sunak

  Saturday, July 16, 2022
ಭೂಮಿ ಗುಂಡಾಗಿದೆ,ತಿರುಗುತ್ತಿರುವ ಕಾರಣ ಮೇಲಿದ್ದವನು ಕೆಳಕ್ಕೆ ದೂಡಲ್ಪಡುತ್ತಾನೆ .ಕೆಳಗಿದ್ದವನು ಮೇಲಕ್ಕೆ ಏರಲ್ಪಡುತ್ತಾನೆ ಅನ್ನುವುದು ಬಲವಾದ ನಂಬಿಕೆ ."ಅತ್ತೆಗೊಂದು ಕಾಲ,ಸೊಸೆಗೊಂದು ಕಾಲ".ಅನ್ನುವುದು ಗಾದೆಮಾತು.ಅದು ಇಲ್ಲಿ ಅಕ್ಷರ ಸಹ ನಿಜವಾಗಿದೆ.ಸುಮಾರು 200 ವರ್ಷಗಳಿಗೂ ಅಧಿಕಕಾಲ ಬ್ರಿಟಿಷರು  ನಮ್ಮ ದೇಶವನ್ನು ಆಳಿದ್ದರು.ಅವರ ಮುಷ್ಟಿಯಲ್ಲಿ ಭಾರತೀಯರು ಬಂಧಿಯಾಗಿದ್ದು ಇತಿಹಾಸ .ಆದರೆ ನಾವು ಮಾತ್ರ ಅವರ ಮೇಲೆ ಸೇಡೇ ತೀರಿಸಿಕೊಳ್ಳಲಾಗಲಿಲ್ಲ ಅಂತ ಕೋಟ್ಯಾಂತರ ದೇಶಭಕ್ತ ಮರಗುತ್ತದೆ ದೇಹತ್ಯಾಗ ಮಾಡಿದರು .ಹಗೆಯು ಹೊಗೆಯ ರೂಪಾಂತರಗೊಂಡು ಅದೇ ಬ್ರಿಟಿಷ್  ಪ್ರಜೆಗಳನ್ನು ಭಾರತೀಯನೊಬ್ಬನು,ಅದರಲ್ಲೂ ಕರ್ನಾಟಕದ ಅಳಿಯ ಆಳುತ್ತಾನೆ ಎನ್ನುವುದು ಸಮಸ್ತ ಭಾರತೀಯರು ಎದೆಯುಬ್ಬಿಸಿ ಹೆಮ್ಮೆ ಪಡುವ ಸಂದರ್ಭ ಈಗ ಒದಗಿ ಬಂದಿದೆ.ಹೌದು ಆ ಭಾರತೀಯ One and ony Mr.Rishi Sunak.
      ನಿಜ,ರಿಷಿ ಸುನಕ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ.ಅಂದರೆ ಮಗಳ ಗಂಡ.ಅವರು ಇಂಗ್ಲೆಂಡ್ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆ ಅಲಂಕರಿಸುವ ಕಾರ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ.ಯಾರನ್ನು ಬೇಕಾದರೂ ಪ್ರಧಾನಿ ಮಾಡಿ ಆದರೆ ರಿಷಿ ಪ್ರಧಾನಿಯಾಗುವುದು ಬೇಡವೆಂಬ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ಗುಪ್ತವಾಗಿ ತಮ್ಮ ಬೆಂಬಲಿಗರಿಗೆ ಪ್ರಚಾರದ  ನಡುವೆಯೇ ಪ್ರಧಾನಿ ಹುದ್ದೆ ಏರುವಲ್ಲಿ ಪ್ರಬಲವಾದ ಪೈಪೋಟಿ ನಡೆಸಿದ್ದಾರೆ.ಅವರು ಈ ಕದನದಲ್ಲಿ  ಖಂಡಿತವಾಗಿ ಜಯಶಾಲಿಯಾಗುತ್ತಾರೆ ಅನ್ನುವುದು ಅಸಂಖ್ಯೆ ಭಾರತೀಯರ ಅಭಿಲಾಷೆ.
      ಕನ್ನಡಿಗರ ಪರವಾಗಿ ನಿಮ್ಮ ಶುಭಾಶಯ 
logoblog

Thanks for reading Rishi Sunak

Previous
« Prev Post

No comments:

Post a Comment