Kpscvani

educational ,employment ,health,sports,political news and other information


Tuesday, March 1, 2022

Assistant Professor Admit Card Released

  shekharagouda       Tuesday, March 1, 2022

🌐 ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ - 🌐

🍎 2021 ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನದ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆಗಳು

👉 1. ಪ್ರವೇಶ ಪತ್ರವು ದ್ವಿಪ್ರತಿಯುಳ್ಳದ್ದಾಗಿರುತ್ತದೆ, ಒಂದು ಅಭ್ಯರ್ಥಿಯ ಪ್ರತಿ, ಮತ್ತೊಂದು ಕೆಇಎ ಪ್ರತಿ, ಅಭ್ಯರ್ಥಿಯು ನಿಗದಿತ ಎರಡೂ ಸ್ಥಳಗಳಲ್ಲಿ ಅವನ / ಅವಳ ಇತ್ತೀಚಿನ ಬಣ್ಣದ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಲಗತ್ತಿಸಿ, ಭಾವಚಿತ್ರದ ಮೇಲೆ ಗೆಜೆಟೆಡ್ ಅಧಿಕಾರಿಯ ಮೊಹರು ಮತ್ತು ಸಹಿ ಪಡೆಯಬೇಕು.

👉 2. ಒಂದು ವೇಳೆ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಐಚ್ಛಿಕ ವಿಷಯಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ, ಸಂಬಂಧಿಸಿದ ಅರ್ಜಿ ಸಂಖ್ಯೆಯನ್ನು ನಮೂದಿಸಿ ಪ್ರತಿಯೊಂದು ಐಚ್ಛಿಕ ವಿಷಯಗಳಿಗೆ ಪ್ರತ್ಯೇಕವಾದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

👉 3. ಅಭ್ಯರ್ಥಿಯು ಒಂದೇ ಒಂದು ಐಚ್ಛಿಕ ವಿಷಯಕ್ಕೆ ಮಾತ್ರ ಅರ್ಜಿ ಸಲ್ಲಿಸಿದ್ದರೆ. ಒಂದು ಪ್ರವೇಶ ಪತ್ರವನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

👉 4. ಅಭ್ಯಥಿಯು ಎರಡೂ ಪ್ರತಿಯ ಪ್ರವೇಶ ಪತ್ರವನ್ನು ತನ್ನೊಡನೆ ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗಬೇಕು.

👉 5. ಪ್ರವೇಶ ಪತ್ರದ ಕೆಇಎ ಪ್ರತಿಯನ್ನು ಆಯಾ ಐಚ್ಛಿಕ ವಿಷಯದ ಪರೀಕ್ಷೆ ಮುಗಿದ ನಂತರ ಕೊಠಡಿ ಮೇಲ್ವಿಚಾರಕರಿಗೆ ನೀಡಬೇಕು.

👉 6. ಪ್ರವೇಶ ಪತ್ರದ ಕೆಇಎ ಪ್ರತಿಯನ್ನು ಕಡ್ಡಾಯ ಪತ್ರಿಕೆಯ ಪರೀಕ್ಷೆಯ ದಿನಗಳಂದು ಕೊಠಡಿ ಮೇಲ್ವಿಚಾರಕರಿಗೆ ನೀಡಬಾರದು.

logoblog
Previous
« Prev Post

No comments:

Post a Comment