Kpscvani

educational ,employment ,health,sports,political news and other information


Saturday, December 31, 2022

ಮೋದಿಗೆ ಮೋದಿಯೇ ಸಾಟಿ

  shekharagouda       Saturday, December 31, 2022
Subject :story

Subject Language : Kannada

Which Department : all

Place : Karnataka

Announcement Date: 31/12/2022

Subject Format : PDF/JPJ

Subject Size : 56kb

Pages :01

Scanned Copy : Yes

Editable Text : NO

Password Protected :  

Download Link : Yes

Copy Text : NO

Print Enable : Yes

Quality : High

Subject Size Reduced :NO

Password : NO

Cost : Free

          ಮೋದಿಗೆ ಮೋದಿಯೇ ಸಾಟಿ

     ಇವತ್ತು ಯಾರಾದರೂ ಸರಕಾರಿ ನೌಕರರಾಗಿದ್ದರೆ,ಚುನಾಯಿತ ಪ್ರತಿನಿಧಿಯಾಗಿದ್ದರೆ, ಅವರು ಎಷ್ಟೇ  ಭ್ರಷ್ಟಾಚಾರಿಗಳಾಗಿದ್ದರೂ ಅವರ ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಗೊಂಡಾಗ ಅವರು ಮೊರೆ ಹೋಗುವುದು ಆಸ್ಪತ್ರೆಯ ಖರ್ಚೆಲ್ಲ ಸರ್ಕಾರವೇ ಭರಿಸುವಂತೆ ನೋಡಿಕೊಳ್ಳುವುದು .ಗ್ರಾಮ ಪಂಚಾಯಿತಿ ಒಬ್ಬ ಸದಸ್ಯನ ತಂದೆ ಅಥವಾ ತಾಯಿ ತೀರಿಹೋದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಂತಿಮ ಕ್ರಿಯೆಯನ್ನು ಮುಗಿಸುತ್ತಾರೆ .ಅವರ ಮನೆಯ ಮದುವೆಯ ಕಾರ್ಯಕ್ರಮದಲ್ಲಂತೂ ವೈಭವಕ್ಕೆ ಎಲ್ಲೆಯೇ ಇರುವುದಿಲ್ಲ .
       ಆದರೆ ನರೇಂದ್ರ ಮೋದಿಯವರು ಮೂರು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎರಡು  ಬಾರಿ ಈ ದೇಶದ ಪ್ರಧಾನಮಂತ್ರಿಗಳಾಗಿದ್ದವರು.ಅವರು ಮನಸ್ಸು ಮಾಡಿದ್ದರೆ ಅವರ ಹೆತ್ತ ತಾಯಿಯು ಅನಾರೋಗ್ಯಗೊಂಡಾಗ  ಅವರನ್ನು ವಿದೇಶಿದಲ್ಲಿ ಅತ್ಯಂತ ಸುವ್ಯವಸ್ಥಿತ ಆಸ್ಪತ್ರೆಗಳಲ್ಲಿ ಸರಕಾರಿ ಖರ್ಚಿನಲ್ಲಿ ವ್ಯವಸ್ಥೆ ಕಲ್ಪಿಸಬಹುದಾಗಿತ್ತು.ಅಥವಾ ವಿದೇಶದಿಂದ ವೈದ್ಯರನ್ನು ಕರೆತರಬಹುದಾಗಿತ್ತು.ಇಲ್ಲವೇ ಈ ದೇಶದ ಅತ್ಯಂತ ಸುವ್ಯವಸ್ಥಿತ ಹಾಗೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ  ಸರಕಾರಿ ಖರ್ಚಿನಲ್ಲಿ ಭರಿಸಬಹುದಾಗಿತ್ತು. ಆದರೆ ಅವರು ಇದ್ಯಾವುದನ್ನು ಮಾಡದೇ ಬಡವರ ಧನ್ವಂತರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅವರು ಅವರ ಕುಟುಂಬದ ಹೊರೆಯನ್ನು ಎಂದಿಗೂ ಸರ್ಕಾರದ ಮೇಲೆ ಹೇರಿಲ್ಲ.
      ಮೋದಿಯವರ ತಾಯಿ ಇಹಲೋಕ ತ್ಯಜಿಸಿದಾಗಲೂ ಅಷ್ಟೇ  .ಅರ ಮಾತೃರ್ಶ್ರೀ ನಸುಕಿನ 3:30 ಜೀವಬಿಟ್ಟರೆ ಬೆಳಗಿನ 9 ಗಂಟೆಗೆ ಸಕಲ ಅಂತಿಮ ಕ್ರಿಯೆ ಮುಗಿಸಿ 9:30 ಕರ್ತವ್ಯಕ್ಕೆ ಹಾಜರಾಗಿದ್ದರು.ಕುಟುಂಬದ ಸದಸ್ಯರನ್ನು ಬಿಟ್ಟರೆ ಉಳಿದವರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು .ಇಲ್ಲವಾದರೆ ಅವರ ಮನೆಯ ಮುಂದೆ ಜನಜಾತ್ರೆಯಾಗುತ್ತಿತ್ತು.ಅವರ ತಾಯಿಯ  ಅಂತ್ಯಕ್ರಿಯೆ ಖರ್ಚು ಅಂದಾಜು 2 ಸಾವಿರದಿಂದ 5 ಸಾವಿರ ತಗುಲಿರಬಹುದು.
     ಮೋದಿಜಿಯವರ ಕುಟುಂಬದ ಸದಸ್ಯರು ಇಂದಿಗೂ ಜನಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದಾರೆ.ಅವರ ಕುಟುಂಬದವರು ಯಾವತ್ತಿಗೂ ಪಾರ್ಲಿಮೆಂಟ್ ಹೌಸ್ ಗೆ ಕಾಲಿಟ್ಟಿಲ್ಲ.ವ್ಯವಸ್ಥೆಲ್ಲಿ ಮೂಗು ತೂರಿಸಿಲ್ಲ.ಅವರ ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾವಚಿತ್ರಗಳನ್ನು ನಾನೆಂದು ನೋಡಿಲ್ಲ.
     ಇಂತಹ ಸರಳ ಸಜ್ಜನಿಕೆಯ ಪ್ರಧಾನ ಮಂತ್ರಿಗಳನ್ನು  ಯಾರು ನೋಡಿರಲು ಸಾಧ್ಯ .ಇಷ್ಟು ಶುದ್ಧ ಹಸ್ತ ಪ್ರಧಾನಮಂತ್ರಿಗಳನ್ನು ಪಡೆದ ನಾವೆ ಧನ್ಯರಲ್ಲವೇ?
                   -ನಿಮ್ಮವ 
    🙏 ಶೇಖರಗೌಡ ಉದಾನಗೌಡ್ರ🙏
logoblog
Previous
« Prev Post

No comments:

Post a Comment